Saturday, 20 July 2013

Anniversary ಗಿಫ್ಟ್...

          ಒಂದು ವರ್ಷ..!!! ಒಂದು ವರ್ಷ ಹೇಗೆ ಕಳೆಯಿತು ಅಂತಾನೆ ಗೊತ್ತಾಗ್ತಿಲ್ಲ ಕಣೋ ...  ಇನ್ನೂ ನೀನು ತಲೆಬಾಗಿಲ ಮೇಲೆ ಅಲಂಕರಿಸಿ ಅಕ್ಕಿ ತುಂಬಿ ಇಟ್ಟ ಸೇರನ್ನು ನಾಚುತ್ತಾ ತುಳಿದು ಗೃಹಪ್ರವೇಶ ಮಾಡಿದ್ದು, ನಿನ್ನ ಅಮ್ಮನನ್ನು ತಬ್ಬಿಕೊಂಡು ಅತ್ತಿದ್ದು, ನಿನ್ನ ಅಣ್ಣ ಬಂದು ನಿಮ್ಮಿಬ್ಬರನ್ನು ಸಮಾಧಾನ ಮಾಡಿದ್ದು, ನಾನು ಏನೂ ಮಾಡಲರಿಯದ ಮಂಕನಂತೆ ನಿನ್ನನ್ನೇ ನೋಡುತ್ತಿದ್ದುದು ಎಲ್ಲಾ ಕಣ್ಣ ಮುಂದೆ ಕಟ್ಟಿದಂತಿದೆ..!! ಆಗಲೆ ಮದುವೆಯಾಗಿ ಒಂದು ವರುಷ...!!  ನಿನ್ನ  ಜೊತೆ  ಇರುವಾಗ ಸಮಯ ಯಾಕೆ ಇಷ್ಟು ಬೇಗ ಕಳೆಯುತ್ತೆ ಅಂತಾನೆ ತಿಳಿತಿಲ್ಲ.. ಆದರೆ ಈಗ ನೀನಿರದ ಪ್ರತಿ ನಿಮಿಷವೂ ಒಂದೊಂದು ಗಂಟೆಯಂತೆ ಅನಿಸುತ್ತಿದೆ.. ನೀನು ನನ್ನ ಬರ್ತಡೆ ದಿನ  ಉಡುಗೊರೆ ನೀಡಿದ ಟೈಟಾನ್ ವಾಚ್ ಮತ್ತೆ iPhone ಸರಿಯಾಗಿ ಸಮಯ ತೊರಿಸುತ್ತಿದೆಯಾ ಇಲ್ಲವಾ ಅಂತಾ ಪದೆ ಪದೆ ಪರೀಕ್ಷಿಸುವುದೆ ನನ್ನ ದಿನಚರಿಯ ಬಹುದೊಡ್ಡ ಕೆಲಸವಾಗಿದೆ...!!

         ಯಾವ ಜನುಮದ, ಯಾವ ಪುಣ್ಯದ ಫಲವೋ ನಿನು ನನಗೆ ದೊರಕಿದ್ದು.... ನಮ್ಮ ಮದುವೆ ಒಂಥರಾ ಅರೆಂಜ್-ಲವ್- ಅರೆಂಜ್ ಅಲ್ವಾ..!! ನೀನು ಹೇಳ್ತಿದ್ಯಲ್ಲಾ, ನಾವಿಬ್ರೂ ಡಿಫರೆಂಟ್ ಕಣೊ ಅಂತಾ. ಅದೆಷ್ಟು ನಿಜ..  ಮದುವೆಯ ಹೊಸದರಲ್ಲೆರಡು ಬಾರಿ ತವರಿಗೆ ಹೋದದ್ದು ಬಿಟ್ಟರೆ ನೀನು ತವರಿಗೆ ಹೋದದ್ದು ಯಾವಾಗಂತ ನೆನಪಾಗ್ತಿಲ್ಲ.. ಅಮ್ಮ ಫೋನ್ ಮಾಡಿದಾಗಲೆಲ್ಲಾ ನನ್ನ ತೊಡೆಯಮೇಲೆ ಮಲಗಿ , ಇವರನ್ನು ಇಲ್ಲೇ  ಒಬ್ಬರನ್ನೇ ಬಿಟ್ಟರೆ ಊಟ, ತಿಂಡಿ, ಮನೆ ಎಲ್ಲಾ ಮರೆತು, ಆಫೀಸ್, ಲ್ಯಾಪಿ , ಪ್ರೋಜೆಕ್ಟ್ಸ್ ಅಂತಾ ಆರೋಗ್ಯ ಕೆಡ್ಸಕೊಂಡು ಮಲ್ಗತಾರೆ ಅಂತಾ ಹುಸಿ ಮುನಿಸಿನಿಂದ ಕಂಪ್ಲೆಂಟ್ ಮಾಡ್ತಿಯಲ್ಲಾ, ಯಾಕೊ ಗೊತ್ತಿಲ್ಲ ಕಣೋ ನೀನು ಈ ಥರ ಅಮ್ಮನಲ್ಲಿ ದೂರವಾಣಿಯಲ್ಲಿ ದೂರೊಪ್ಪಿಸೋದನ್ನ ಕೇಳೋಕೆ ತುಂಬಾ ಹಿತವಾಗಿರತ್ತೆ...

        ನೀನು ನಮ್ಮ Marriage Anniversary ದಿನ ಫೋನ್ ನಲ್ಲಿ ಕೊಟ್ಟ Surprise ಗಿಫ್ಟ್ ಸಿಕ್ಕ ಮೇಲಂತೂ ನಂಗೆ ಸ್ವರ್ಗಕ್ಕೆ ಮೂರೇ ಗೇಣು...!! ಕೋತಿ ಕಣೋ ನೀನು, ನಾನು ಅಪ್ಪ ಆಗ್ತಿರೋದನ್ನ ಫೋನ್ ನಲ್ಲಿ ಹೇಳ್ತೀಯಾ  ??   ಯಾವಾಗ ನಿನ್ನ ನೋಡ್ತೀನೋ, ಯಾವಾಗ ಎತ್ತಿ ಮುದ್ದಾಡ್ತೀನೋ ಅನಿಸ್ತಿದೆ.. ಇನ್ನೂ ನಾಲ್ಕು ದಿನ ಬೇಕು ಈ ಹಾಳು ಪ್ರೋಜೆಕ್ಟ್  ಕಂಪ್ಲೀಟ್ ಆಗೊಕೆ...  ಅಲ್ಲೀ ತನಕ ಈ ಚಳಿಯ ದೇಶದಲ್ಲಿ ಒದ್ದಾಡ್ಬೇಕಲ್ಲಾ ಅಂತಾ ಬೇಜಾರು... ಯಾವಾಗ India ಕ್ಕೆ ಬರ್ತೀನೋ ಅನಿಸ್ತಿದೆ... Congrats ಕಣೋ ನೀನು ಅಮ್ಮ ಆಗ್ತಿದೀಯಾ.. ಇನ್ನೇಳು ತಿಂಗಳಲ್ಲಿ ನನ್ನ ಕಂದಮ್ಮನ ಮಡಿಲಲ್ಲೊಂದು ಪುಟ್ಟ ಕಂದಮ್ಮ..  ನೆನೆಸಿಕೊಂಡ್ರೇ ಮೈ ಜುಂ ಅನ್ತಿದೆ..... !!!  ನೀನೇ ಒಂದು ಮಗು ಈಗ ನಿನಗೊಂದು ಮಗು.. Thank You Very Very Very Much ಕಣೋ For Being My Wife :) Love You.....

        ನಮ್ಮ Marriage Anniversary ಗಿಫ್ಟ್ ತುಂಬಾ ಚೆನ್ನಾಗಿದೆ ಕಣೋ...!!  ಮೋದಲೇ ಹೇಳಿದೀನಿ ಕಣೋ  ನಿನ್ನಮ್ಮನ ಹೊಟ್ಟೆಯಲ್ಲಿ ನೀನಿದ್ಧಾಗ ನಿನ್ನಪ್ಪ ದಾಡಿ ಬಿಟ್ಟ ಥರ ನಾನು ಈಗ ಬಿಡೋಕಾಗಲ್ಲ ಅಂತ.. ನಂಗೆ 4 ದಿನ ಶೇವ್ ಮಾಡಿಲ್ಲ ಅಂದ್ರೆ ಗಡ್ಡ ಕೆರೆಯುತ್ತೆ... ಅದು ನಿಂಗೂ ಗೊತ್ತಲ್ವಾ ?? ಈ ಒಂದು ವಿಷಯದಲ್ಲಿ Sorry ಕಣೋ.... ಹಾಂ ಮರ್ತಿದ್ದೆ..  ನಿಂಗಂತಾ ಏನೋ ಗಿಫ್ಟ್ ತಗೊಂಡಿದಿನಿ... ನಂಗೊತ್ತು ನೀನದನ್ನ ತುಂಬಾ ಇಷ್ಟಪಡ್ತೀಯಾ ಅಂತಾ..ನಿಂಗೆ ಒಂದು ಚಿಕ್ಕ Surprise...!!

Miss U ಚಿನ್ನು..... ಮುಂದಿನ Weekend ನಿನ್ ಜೊತೆನೆ...!!


                                                                          ಇಂತಿ Youz
                                                                                         Chweeeet Hubbby

5 comments:

  1. Supppppppppper..... First half nan kathene odidang iddittu....!!!

    ReplyDelete
  2. ಮನಸ್ಸಿನ ಭಾವನೆಗಳಿಗೆ ಹಿಡಿದ ಕನ್ನಡಿಯಂತಿದೆ ಲೇಖನ.. ಅಭಿವ್ಯಕ್ತಿ ಚೆನ್ನಾಗಿದೆ...:) :)

    ನನ್ನದೇ ಮನಸ್ಸಿನ ಭಾವನೆಗಳೆಂಬಂತೆ ಭಾಸವಾಗಿದ್ದು ನಿಜ..:) :)

    ReplyDelete
  3. ಭಾವನಾತ್ಮಕವಾಗಿದೆ

    ReplyDelete

Search This Blog