Saturday, 20 July 2013

Anniversary ಗಿಫ್ಟ್...

          ಒಂದು ವರ್ಷ..!!! ಒಂದು ವರ್ಷ ಹೇಗೆ ಕಳೆಯಿತು ಅಂತಾನೆ ಗೊತ್ತಾಗ್ತಿಲ್ಲ ಕಣೋ ...  ಇನ್ನೂ ನೀನು ತಲೆಬಾಗಿಲ ಮೇಲೆ ಅಲಂಕರಿಸಿ ಅಕ್ಕಿ ತುಂಬಿ ಇಟ್ಟ ಸೇರನ್ನು ನಾಚುತ್ತಾ ತುಳಿದು ಗೃಹಪ್ರವೇಶ ಮಾಡಿದ್ದು, ನಿನ್ನ ಅಮ್ಮನನ್ನು ತಬ್ಬಿಕೊಂಡು ಅತ್ತಿದ್ದು, ನಿನ್ನ ಅಣ್ಣ ಬಂದು ನಿಮ್ಮಿಬ್ಬರನ್ನು ಸಮಾಧಾನ ಮಾಡಿದ್ದು, ನಾನು ಏನೂ ಮಾಡಲರಿಯದ ಮಂಕನಂತೆ ನಿನ್ನನ್ನೇ ನೋಡುತ್ತಿದ್ದುದು ಎಲ್ಲಾ ಕಣ್ಣ ಮುಂದೆ ಕಟ್ಟಿದಂತಿದೆ..!! ಆಗಲೆ ಮದುವೆಯಾಗಿ ಒಂದು ವರುಷ...!!  ನಿನ್ನ  ಜೊತೆ  ಇರುವಾಗ ಸಮಯ ಯಾಕೆ ಇಷ್ಟು ಬೇಗ ಕಳೆಯುತ್ತೆ ಅಂತಾನೆ ತಿಳಿತಿಲ್ಲ.. ಆದರೆ ಈಗ ನೀನಿರದ ಪ್ರತಿ ನಿಮಿಷವೂ ಒಂದೊಂದು ಗಂಟೆಯಂತೆ ಅನಿಸುತ್ತಿದೆ.. ನೀನು ನನ್ನ ಬರ್ತಡೆ ದಿನ  ಉಡುಗೊರೆ ನೀಡಿದ ಟೈಟಾನ್ ವಾಚ್ ಮತ್ತೆ iPhone ಸರಿಯಾಗಿ ಸಮಯ ತೊರಿಸುತ್ತಿದೆಯಾ ಇಲ್ಲವಾ ಅಂತಾ ಪದೆ ಪದೆ ಪರೀಕ್ಷಿಸುವುದೆ ನನ್ನ ದಿನಚರಿಯ ಬಹುದೊಡ್ಡ ಕೆಲಸವಾಗಿದೆ...!!

         ಯಾವ ಜನುಮದ, ಯಾವ ಪುಣ್ಯದ ಫಲವೋ ನಿನು ನನಗೆ ದೊರಕಿದ್ದು.... ನಮ್ಮ ಮದುವೆ ಒಂಥರಾ ಅರೆಂಜ್-ಲವ್- ಅರೆಂಜ್ ಅಲ್ವಾ..!! ನೀನು ಹೇಳ್ತಿದ್ಯಲ್ಲಾ, ನಾವಿಬ್ರೂ ಡಿಫರೆಂಟ್ ಕಣೊ ಅಂತಾ. ಅದೆಷ್ಟು ನಿಜ..  ಮದುವೆಯ ಹೊಸದರಲ್ಲೆರಡು ಬಾರಿ ತವರಿಗೆ ಹೋದದ್ದು ಬಿಟ್ಟರೆ ನೀನು ತವರಿಗೆ ಹೋದದ್ದು ಯಾವಾಗಂತ ನೆನಪಾಗ್ತಿಲ್ಲ.. ಅಮ್ಮ ಫೋನ್ ಮಾಡಿದಾಗಲೆಲ್ಲಾ ನನ್ನ ತೊಡೆಯಮೇಲೆ ಮಲಗಿ , ಇವರನ್ನು ಇಲ್ಲೇ  ಒಬ್ಬರನ್ನೇ ಬಿಟ್ಟರೆ ಊಟ, ತಿಂಡಿ, ಮನೆ ಎಲ್ಲಾ ಮರೆತು, ಆಫೀಸ್, ಲ್ಯಾಪಿ , ಪ್ರೋಜೆಕ್ಟ್ಸ್ ಅಂತಾ ಆರೋಗ್ಯ ಕೆಡ್ಸಕೊಂಡು ಮಲ್ಗತಾರೆ ಅಂತಾ ಹುಸಿ ಮುನಿಸಿನಿಂದ ಕಂಪ್ಲೆಂಟ್ ಮಾಡ್ತಿಯಲ್ಲಾ, ಯಾಕೊ ಗೊತ್ತಿಲ್ಲ ಕಣೋ ನೀನು ಈ ಥರ ಅಮ್ಮನಲ್ಲಿ ದೂರವಾಣಿಯಲ್ಲಿ ದೂರೊಪ್ಪಿಸೋದನ್ನ ಕೇಳೋಕೆ ತುಂಬಾ ಹಿತವಾಗಿರತ್ತೆ...

        ನೀನು ನಮ್ಮ Marriage Anniversary ದಿನ ಫೋನ್ ನಲ್ಲಿ ಕೊಟ್ಟ Surprise ಗಿಫ್ಟ್ ಸಿಕ್ಕ ಮೇಲಂತೂ ನಂಗೆ ಸ್ವರ್ಗಕ್ಕೆ ಮೂರೇ ಗೇಣು...!! ಕೋತಿ ಕಣೋ ನೀನು, ನಾನು ಅಪ್ಪ ಆಗ್ತಿರೋದನ್ನ ಫೋನ್ ನಲ್ಲಿ ಹೇಳ್ತೀಯಾ  ??   ಯಾವಾಗ ನಿನ್ನ ನೋಡ್ತೀನೋ, ಯಾವಾಗ ಎತ್ತಿ ಮುದ್ದಾಡ್ತೀನೋ ಅನಿಸ್ತಿದೆ.. ಇನ್ನೂ ನಾಲ್ಕು ದಿನ ಬೇಕು ಈ ಹಾಳು ಪ್ರೋಜೆಕ್ಟ್  ಕಂಪ್ಲೀಟ್ ಆಗೊಕೆ...  ಅಲ್ಲೀ ತನಕ ಈ ಚಳಿಯ ದೇಶದಲ್ಲಿ ಒದ್ದಾಡ್ಬೇಕಲ್ಲಾ ಅಂತಾ ಬೇಜಾರು... ಯಾವಾಗ India ಕ್ಕೆ ಬರ್ತೀನೋ ಅನಿಸ್ತಿದೆ... Congrats ಕಣೋ ನೀನು ಅಮ್ಮ ಆಗ್ತಿದೀಯಾ.. ಇನ್ನೇಳು ತಿಂಗಳಲ್ಲಿ ನನ್ನ ಕಂದಮ್ಮನ ಮಡಿಲಲ್ಲೊಂದು ಪುಟ್ಟ ಕಂದಮ್ಮ..  ನೆನೆಸಿಕೊಂಡ್ರೇ ಮೈ ಜುಂ ಅನ್ತಿದೆ..... !!!  ನೀನೇ ಒಂದು ಮಗು ಈಗ ನಿನಗೊಂದು ಮಗು.. Thank You Very Very Very Much ಕಣೋ For Being My Wife :) Love You.....

        ನಮ್ಮ Marriage Anniversary ಗಿಫ್ಟ್ ತುಂಬಾ ಚೆನ್ನಾಗಿದೆ ಕಣೋ...!!  ಮೋದಲೇ ಹೇಳಿದೀನಿ ಕಣೋ  ನಿನ್ನಮ್ಮನ ಹೊಟ್ಟೆಯಲ್ಲಿ ನೀನಿದ್ಧಾಗ ನಿನ್ನಪ್ಪ ದಾಡಿ ಬಿಟ್ಟ ಥರ ನಾನು ಈಗ ಬಿಡೋಕಾಗಲ್ಲ ಅಂತ.. ನಂಗೆ 4 ದಿನ ಶೇವ್ ಮಾಡಿಲ್ಲ ಅಂದ್ರೆ ಗಡ್ಡ ಕೆರೆಯುತ್ತೆ... ಅದು ನಿಂಗೂ ಗೊತ್ತಲ್ವಾ ?? ಈ ಒಂದು ವಿಷಯದಲ್ಲಿ Sorry ಕಣೋ.... ಹಾಂ ಮರ್ತಿದ್ದೆ..  ನಿಂಗಂತಾ ಏನೋ ಗಿಫ್ಟ್ ತಗೊಂಡಿದಿನಿ... ನಂಗೊತ್ತು ನೀನದನ್ನ ತುಂಬಾ ಇಷ್ಟಪಡ್ತೀಯಾ ಅಂತಾ..ನಿಂಗೆ ಒಂದು ಚಿಕ್ಕ Surprise...!!

Miss U ಚಿನ್ನು..... ಮುಂದಿನ Weekend ನಿನ್ ಜೊತೆನೆ...!!


                                                                          ಇಂತಿ Youz
                                                                                         Chweeeet Hubbby

Wednesday, 17 July 2013

ಹೀಗೊಂದು ಪತ್ರ ...!!!

ಡಿಯರ್,
         ನಿನ್ನ Facebook ID ಯನ್ನು ನನ್ನ Facebook ID ಯಲ್ಲಿ Block ಮಾಡ್ತಾ ಇದಿನಿ, ಕಾರಣ ಇಷ್ಟೇ, ನನ್ನ  Profile ತೆರೆದಾಗಲೆಲ್ಲ ನಿನ್ನ Profile ಎಲ್ಲಕ್ಕಿಂತ ಮೊದಲು ಕಾಣ್ಸೋದು, ಆಮೇಲೆ ನೀನು ಲೈಕ್ ಮಾಡಿದ Applications Wall Postಗಳು..   ನೀನು Online ಇರ್ಲಿ ಇಲ್ದೇ ಇರ್ಲಿ ನಿನ್ನ ಪ್ರೊಫೈಲ್ Available  Chat  ನಲ್ಲಿ Display ಆಗ್ತಿರತ್ತೆ.  Facebook ಗೆ ಏನು ಗೊತ್ತು You are not Available to me ಅಂತಾ....!!

        ನಿನ್ನ ID  ನೋಡಿದಾಗಲೆಲ್ಲಾ  ನನ್ನ ಕಣ್ಣು ತುಂಬಿ ಬರ್ತಾ ಇದೆ , ಮನಸ್ಸಿಲ್ಲದ ಮನಸ್ಸಿಂದ ನಿನ್ನ ಮರೆಯುವ ಕೆಲಸ ನಡೆಯುತ್ತಿದೆ. ಮನಸ್ಸು ಗೆಲ್ಲತ್ತಾ, ಬುದ್ದಿ ಗೆಲ್ಲತ್ತಾ ಅಂತಾ ಕಾದು  ನೋಡಬೇಕಿದೆ. ಮರೆತೆನೆಂದರೂ, ಮರೆಯಲಾರದಂತ ನೆನಪು ಕೊಟ್ಟಿರುವೆ ನೀ...  ಮನಸ್ಸೇಕೋ ಮಾತುಕೆಳುತ್ತಿಲ್ಲ ...!

     ನಾನು ಮತ್ತು ನನ್ನ ಮನಸ್ಸು ಎಷ್ಟು ಸೂಕ್ಷ್ಮ ಅಂತಾ ನಿನಗೇ ಗೊತ್ತಲ್ವಾ ?? ಚಿಕ್ಕ ಪುಟ್ಟ ವಿಷಯಕ್ಕೂ ದೊಡ್ಡ ರಂಪಾಟ ಮಾಡುವ ನಾನು ಉಸಿರಿನಿಂದಿರುವುದು ಆಶ್ಚರ್ಯವೇ ....! ನೀನು ತಿರುಗಿ ಬಂದರೂ ಬರಬಹುದೆಂಬ ಒಂದು ಆಸೆ ಮನದಲ್ಲಿದೆಯಲ್ಲಾ.. ಅದೇ ನನ್ನ ಉಸಿರನ್ನು ನನ್ನ ದೇಹದಲ್ಲಿ  ತಡೆಹಿಡಿದಿರುವುದು ಅನ್ಸತ್ತೆ ... !!

      ನಿನ್ನನ್ನು Block ಮಾಡಿದ್ದು ನನ್ನ Facebook ನಲ್ಲಿರಬಹುದು  ಆದರೆ ನನ್ನ ಮನಸ್ಸಿನಿಂದಲ್ಲ  .... ನನ್ನ ದೇಹದಲ್ಲಿ ಉಸಿರು ನಿಂತು ರಕ್ತ ಹೆಪ್ಪುಗಟ್ಟುವ ತನಕ , ನಿನ್ನ ನೆನಪು ಹೆಪ್ಪುಗಟ್ಟುವುದಿಲ್ಲ.. ನಾನು ನಿನ್ನ ಜೀವನದಲ್ಲಿ ಯಾಕಾಗಿ ಬಂದೆನೋ  ಆ ಕೆಲಸ ಸಂಪೂರ್ಣವಾಗಿರುವುದಕ್ಕೆ  ಖುಷಿಯಿದೆ ......

  ಉಸಿರು ನಿಲ್ಲುವ ತನಕವೂ ನಿನಗಾಗಿ ಕಾಯುತ್ತಿರುವೆ... ಬರಬಹುದೆಂಬ ಆಸೆಹೊತ್ತು......  

       

Monday, 15 July 2013

ನಿನಗಾಗಿ ಅತ್ತು ಅತ್ತು ಕಣ್ಣಲ್ಲಿ ಕಣ್ನೀರೆ ಬತ್ತಿದೆ...

ನಿನಗಾಗಿ ಕಣ್ಣೀರಿಟ್ಟ ದಿನಗಳೆಷ್ಟೋ...
ನಿನ್ನ ಪ್ರೀತಿಗಾಗಿ ಹಂಬಲಿಸಿದ ಘಳಿಗೆಗಳೆಷ್ಟೋ...
ನೀ ಬರುವೆಯೆಂದು ಕಾಯುತ್ತಿದ್ದ ವಾರಗಳೆಷ್ಟೋ....
ನಿನಗಾಗಿ ಅತ್ತು ಅತ್ತು ಕಣ್ಣಲ್ಲಿ ಕಣ್ನೀರೇ ಬತ್ತಿದೆ...
ನಿನಗಾಗಿ ಮತ್ತೆ ಮತ್ತೆ ಅಳಲು ನನ್ನಲ್ಲಿ ವ್ಯವಧಾನವಿಲ್ಲ,ಕಣ್ಣಲ್ಲಿ ನೀರಿಲ್ಲ..

ಓ ಬರಹವೇ ನಿನಗೊಂದು ಥ್ಯಾಂಕ್ಸ್..

ಬರಹಕ್ಕೆ ಯಾವ  ರೀತಿಯ ಶಕ್ತಿ ಇದೆಯಂದು ಈಗ ಅರಿವಾಗುತ್ತಿದೆ...
ಬರೆದಷ್ಟೂ ಮನಸ್ಸಿನ ಭಾರ ಕಡಿಮೆಯಾಗುತ್ತಿದೆ....
ಪೆನ್ನಿನ ಶಾಯಿ ಖಾಲಿಯಾದಂತೆಲ್ಲ ಮನಸ್ಸಿನ ನೋವು ಕಡಿಮೆಯಾಗುತ್ತಿದೆ...

ಓ ಬರಹವೇ ನಿನ್ನಲ್ಲಿ ನನ್ನನ್ನು  ಎಳೆದು ತಂದಿದ್ದಕ್ಕೆ ನಿನಗೊಂದು ಥ್ಯಾಂಕ್ಸ್... 

Saturday, 13 July 2013

ಹೇಳಿ ಹೋಗು ಕಾರಣ...!!!

ನೀನು ನನ್ನಿಂದ ದೂರ ಹೋಗುತ್ತಿರುವುದು ನಿನ್ನ ಅದೃಷ್ಟವೋ ನನ್ನ ದುರಾದೃಷ್ಟವೋ ತಿಳಿಯುತ್ತಿಲ್ಲ. ಆದರೆ ನೀನು ನನ್ನಿಂದ ದೂರ ಸರಿಯುತ್ತಿರುವುದಂತೂ ನಿಜ. ವಿಷಯ ಏನೇ ಇರಲಿ, ಅದರ ಬಗ್ಗೆ ವಿವರಣೆ ನೀಡುವ ಅವಶ್ಯಕತೆ ಇಲ್ಲ. ಯಾಕೆಂದರೆ, ಸುಳ್ಳೇಂದರೇ ದೂರ ಓಡುವ ನನಗೆ ನೀನು ಹೇಳುವ ಕಟ್ಟು ಕಥೆಗಳನ್ನು ಕೇಳುವ ವ್ಯವಧಾನವಿಲ್ಲ. ಕಳೆದುಕೊಳ್ಳುವುದೇ ಆಗಿದೆ, ಇನ್ನು ವಿವರಣೆ ಕೇಳಿ ನಾನೇನು ಸಾಧಿಸುವುದಕ್ಕಿದೆ...???? ಎಲ್ಲವನ್ನೂ ನಿನ್ನ ಜೊತೆ ಕಳೆದುಕೊಳ್ಳುತ್ತಿರುವಾಗ...!!!

ನೀನು ದೂರ ಹೋಗುತ್ತಿರುವುದಕ್ಕಿಂತ, ಕಾರಣವೇನೆಂದು ಹೇಳದೆ ದೂರ ಹೋಗುತ್ತಿದ್ದೀಯಲ್ಲಾ, ಅದು ನನ್ನ ತಾಳ್ಮೆಗೆ ಸವಾಲಾಗಿರುವುದು. ಮಾತನಾಡಬೇಕೆನಿಸಿದರೆ ಚನ್ನಾಗೆ ಮಾತನಾಡುವ ನೀನು, ಬೇಡವೆನಿಸಿದರೆ ಸಾಯುತ್ತೀನೆಂದರೂ ಕಣ್ಣೆತ್ತಿ ಕೂಡಾ ನೋಡುವುದಿಲ್ಲಾ... ನಿಶ್ಯಬ್ಧ ಸ್ಥಿತಿಯಲ್ಲಿ ತಲೆಕೆಳಗಾಗಿ ಮಲಗಿದ ಮೊಬೈಲ್  ನ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ.. ನೀನೇನು ಮೂಡಿಯಾ ?? ಹಠಮಾರಿಯಾ ?? ಅಥವಾ ಇವೆಲ್ಲಾ ಕೇವಲ ನಟನೆಯಾ ?? ಗೆಳೆತನವೆಂದರೆ ಇಷ್ಟೇನಾ ??

ಇಷ್ಟು ದಿನ ಸ್ನೇಹಿತನಾಗಿ ನನ್ನ ಜೊತೆಗಿದ್ದು, ಸಹೋದರನಂತೆ ಪ್ರೀತಿಸಿ, ತಾಯಿ ಮಗುವನ್ನು ಮುದ್ದಿಸುವಂತೆ ಮುದ್ದಿಸಿ, ಈಗ ನೀನ್ಯಾರೋ, ನಾನ್ಯಾರೋ, ಎನ್ನುವಂತೆ ನನ್ನ ಜೀವನದಿಂದ ಎದ್ದು ಹೋಗುತ್ತಿದ್ದೀಯಲ್ಲಾ,ಇದು ಸರಿಯಾ...?? ಒಂದೇ ತಾಯಿಯ ಹೊಟ್ಟೆಯಲ್ಲಿ ಹುಟ್ಟಿದ್ದರೆ ಹೀಗೆ ಮಾಡುತ್ತಿದ್ದೆಯಾ ??


                                                                                                  - ಇಂತಿ ನಿನ್ನ...(?)
                                                                                                     "___________"

ಮೌನವೇ ಮಾತನಾಡುತ್ತಿದೆ.....

ಮೌನವೇ ಮಾತನಾಡುತ್ತಿದೆ, ಮಾತಿನ ಅವಶ್ಯಕತೆಯಿಲ್ಲ,
ನಡತೆಯೇ ಅರ್ಥಮಾಡಿಸುತ್ತಿದೆ, ವಿವರಿಸುವ ಕೆಲಸವಿಲ್ಲ,
ನಿನ್ನ ತಿರಸ್ಕಾರವೇ ಸಾರಿ ಹೇಳುತ್ತಿದೆ, ನೀನು ನನ್ನವನಲ್ಲ,
ಒಂದು ಬಾರಿ ಬಾಯ್ಬಿಟ್ಟು ಹೇಳಿಬಿಡು ಮತ್ತೆ ಕಾಡುವುದಿಲ್ಲ,
ಪ್ರಾಣ ಹೋದರೂ ಸರಿಯೇ ನಾ ನಿನ್ನ ಮರೆಯುವುದಿಲ್ಲ........

            ಅರಗಿಸಿಕೊಳ್ಳುವುದು ಕಷ್ಟವಾಗುತ್ತಿದೆ, ನಿನ್ನೀ ಮೌನವನ್ನ.....!!!

Wednesday, 10 July 2013

ಕಾಲಚಕ್ರ ತಿರುಗುತ್ತಿದೆ

ದಿನಗಳು ಕಳೆಯುತ್ತಿವೆ,
ಗಂಟೆಗಳು ಉರುಳುತ್ತಿವೆ,
ಗಡಿಯಾರ ಯಾರ ಅಪ್ಪಣೆಗೂ ಕಾಯದೇ ತಿರುಗುತ್ತಿದೆ,
ಇವೆಲ್ಲದರ ನಡುವೆ ಹೋಸ ಕೆಲಸ, ಸ್ನೇಹಿತರು,
ಮನಸ್ಸು ನಿನ್ನನ್ನು ಮರೆಯುತ್ತಿದೆ (?)...!!!!
    ಅಥವಾ ಮರೆತಂತೆ ನಟಿಸುತ್ತಿದೆ..........!!

ಮುದ್ದೆಯಾಗಿದೆ ಮನಸು ನೀ ಮಲಗೆದ್ದ ಹಾಸಿಗೆಯಂತೆ....

ಮನಸ್ಸೇಕೋ ಮುದ್ದೆ ಮುದ್ದೆಯಾಗಿದೆ, ನೀ ಮಲಗೆದ್ದು ಹೋದ ಹಾಸಿಗೆಯಂತೆ,
ಮೈ ತುಂಬಾ ಜಡವಾಗಿದೆ, ಕೈಗಳು ಕಂಪಿಸುತ್ತಿವೆ, 
ಕಣ್ಣಾಲಿಗಳು ಜಲಾವೃತಗೊಂಡಿವೆ, 
ಇಂದೇಕೊ ಬರೆಯಲು ಮನಸ್ಸಾಗುತ್ತಿಲ್ಲ.... 

ನೀನಿಲ್ಲದ ನನ್ನನ್ನು ಕಲ್ಪಿಸಿಕೊಳ್ಳಲು ಅಸಾಧ್ಯವಾಗುತ್ತಿದೆ..
ನನ್ನಿಂದ ಬಲುದೂರ ಸಾಗಿರುವೆ ನೀ, 
ಹಿಂದಿರುಗಿ ಬರುವ ದಾರಿ ತಿಳಿಯದಂತೆ...
ಕನಸಿಗೇನು ಗೊತ್ತು ನೀ ತಿರುಗಿ ಬಾರೆಯೆಂದು..

ಕಾಯುವುದೆ ಕೆಲಸವಾಗಿದೆ, ನಿನ್ನ ಬರುವಿಕೆಯನ್ನು.... 

Tuesday, 9 July 2013

ಮನಸು ಮಾರಾಟಕ್ಕಿದೆ...

ಮನಸು ಮಾರಾಟಕ್ಕಿದೆ, ಆದರೆ ಹಣಕ್ಕಲ್ಲ..
ಭಾವನೆಗಳಿಗೆ ಬೆಲೆಯಿಲ್ಲದ ಬದುಕಲ್ಲಿ,
ಕಣ್ಣೀರಿಗೆ ಕರಗದ ಮನಸ್ಸುಗಳ ನಡುವೆ,
ಪ್ರೀತಿಯನ್ನು ಗುರುತಿಸಲರಿಯದ ಜನಗಳ ನಡುವೆ,
ಮನಸು ಮಾರಾಟಕ್ಕಿದೆ, ಆದರೆ ಹಣಕ್ಕಲ್ಲ..

ಕನಸು ತುಂಬಿದ ಕಣ್ಣಿನಿಂದ ಕಾಯುತ್ತಿರುವ ಪ್ರೇಮಿ..!!

               ನಿನ್ನ ಪ್ರೀತಿಗಾಗಿ ನಾನು ಹಾತೊರೆಯುತ್ತಿದ್ದೆ, ಅದು ನಿನಗೂ ಕೂಡಾ ಗೋತ್ತು. ನಿನ್ನಲ್ಲೀ ಕೂಡಾ ಪ್ರೀತಿ ಇದೆಯೆಂದು ನೀನು ಮಾತನಾಡಿದಾಗ, ಕಿರು ಸಂದೇಶ ಕಳುಹಿಸಿದಾಗ ತಿಳಿಯುತ್ತಿತ್ತು. ಮನಸ್ಸು ಒಳಗೊಳಗೆ ರೆಕ್ಕೆ ಬಲಿತ ಹಕ್ಕಿಯಂತೆ ಹಾರುತ್ತಿತ್ತು.
       ಯಾರ ಕೆಟ್ಟ ದೃಷ್ಟಿ ನಮ್ಮ ಪ್ರೀತಿಯ ಮೇಲೆ ಬಿತ್ತೋ ನಾ ಕಾಣೆ, ನಿನ್ನ ಕರೆಗಾಗಿ ಚಾತಕ ಪಕ್ಷಿಯಂತೆ ನಾ ಕಾಯುವಂತಾಯ್ತು. Inbox ತುಂಬಾ ಹುಡುಕಿದರೂ ನಿನ್ನ ಸಂದೇಶ ಕಾಣದಂತಾಯ್ತು. ನಾ ಮಾಡಿದ ತಪ್ಪಾದರೂ ಏನು??
ನಿನ್ನ ಪ್ರಾಣಕ್ಕಿಂತಾ ಹೆಚ್ಚಾಗಿ ಪ್ರೀತಿಸಿದ್ದಾ?? ಅಂಧನಂತೆ ನಿನ್ನ ನಂಬಿದ್ದಾ ?? ಯೋಚಿಸಿದಂತೆಲ್ಲಾ ಬರೇ ಉತ್ತರವಿಲ್ಲದ ಪ್ರಶ್ನೆಗಳು ಏಳುತ್ತಿವೆ ಮನದಲ್ಲಿ ಸುನಾಮಿಯಂತೆ......

           ಒಂದಲ್ಲಾ ಒಂದು ದಿನ ನನ್ನ ಪ್ರೀತಿಯ ಪವಿತ್ರತೆ ತಿಳಿಯಬಹುದು, ಮತ್ತೆ ನೀನು ನನ್ನಲ್ಲಿ ಬರಬಹುದು, ಆಗ ನಿನಗೆ ಕೊಡಲು ನನ್ನಲ್ಲಿ ಪ್ರೀತಿ   ಇರಬಹುದಾ ????

Face Book

"Facebook " ಪ್ರಪಂಚವೇ ಒಂಥರಾ ಡಿಫರೆಂಟ್....!!
ಹೊಸಬರ ಪರಿಚಯವಾದಂತೆಲ್ಲಾ, ಹಳಬರು ದೂರ ದೂರಾ. ಇದೊಂತರ ಮಿಥ್ಯ ಜಗತ್ತು, ಇಲ್ಲಿ ಅಪರಿಚಿತರು ಪರಿಚಿತರಾಗುತ್ತಾರೆ, ಪರಿಚಿತರು ಅಪರಿಚಿತರಂತಿರುತ್ತಾರೆ...

ಆದರೂ ಬೇಕು ನಂಗೊಂದು "Facebook" ಅಕೌಂಟು..!!!

Monday, 8 July 2013

ಉಡುಗೊರೆ...!!

               ಉಡುಗೊರೆಯೆಂದರೆ ಯಾರಿಗೆ ತಾನೆ ಕುತೂಹಲವಿರಲ್ಲ...?? ನಾನು ಕೂಡಾ ಅದರಿಂದ ಹೊರತಾಗಿಲ್ಲ, ನನಗೂ ಕೂಡಾ ತುಂಬಾ ಕುತೂಹಲ.. ಆದರೆ ಎಂದಿನ ಕುತೂಹಲ  ಇವತ್ತು ಉಡುಗೊರೆಯ ಪಾರ್ಸೆಲ್ ಬಂದಾಗ  ಇರಲಿಲ್ಲ. ಅದರಲ್ಲೂ ಅದನ್ನು ಕಳುಸಿದವರು ಯಾರಂತ ತಿಳಿದಮೇಲಂತೂ ಮನಸ್ಸು ತುಂಬಾ ಭಾರವಾಯ್ತು...

           ಇದೇನಿದು ಈತನಿಗೆ ಹುಚ್ಚು ಅನಿಸುತ್ತಿರಬಹುದಲ್ಲ??  ಇಲ್ಲ ಹಾಗೇನಿಲ್ಲ,  I'm Alright..!! But my mind is not with me :( ಯಾಕಂದ್ರೆ ಉಡುಗೊರೆಯ ಜೊತೆ ಉಡುಗೊರೆ ಕೊಡುತ್ತಿರುವವರು ಬರುತ್ತಾರೆ ಅಂದುಕೊಂಡಿದ್ದೆ...

           ಕಾಯುತ್ತಿದ್ದೆ ನಾ.... ಉಡುಗೊರೆಗಾಗಿ ಅಲ್ಲ, ಅವರಿಗಾಗಿ., ಗಡಿಯಾರವಿನ್ನೂ 8:00 ತೋರಿಸುತ್ತಿದೆ, ಇನ್ನೂ 4 ಗಂಟೆಗಳ ಸಮಯವಿದೆ, ಬಂದರೂ ಬರಬಹುದು..
 
         ಬರುವುದನ್ನೇ ಕಾಯುತ್ತಿರುವೆ..

3rd Person

ತಿಳಿದು ತಿಳಿದೂ ಮಾಡುವ ತಪ್ಪೆಂದರೆ ಇದೇ ಇರಬಹುದು...
ಇಬ್ಬರ ಮಧ್ಯ  ಒಬ್ಬರಾಗಲು ಸಾಧ್ಯವಿಲ್ಲ  ಎಂದು ತಿಳಿದಮೇಲೂ, ಇಬ್ಬರ ಮಧ್ಯ ಹೋಗಿ, ಮೂರನೇಯವನಾಗಿ, ಮನಸು ಕೆಡಿಸಿಕೊಂಡು ಮೂಲೆ ಸೇರುವುದು.
ಇದಕ್ಕೇ ಇರಬಹುದು ನಮ್ಮ ಭವ್ಯ ಭಾರತದ ಪ್ರಜೆಗಳು, ಇಬ್ಬರು ಜಗಳವಾಡುತ್ತಿದ್ದರೆ ಸಮಾಧಾನ ಮಾಡಲು ಹೋಗದೆ, ಸುಮ್ಮನೆ ನಿಂತು ನೋಡಿ ಮಜಾ ತೆಗೆದುಕೊಳ್ಳುವುದು... ಜಗಳ ಬಗೆಹರಿದ ಮೇಲೆ ಜಗಳ ಬಗೆಹರಿಸಲು ಬಂದವನ ಕೇಳೋರ್ರ್ಯಾರು...??

                                                                 - ಜಗಳ ಬಗೆಹರಿಸಲು ಹೋಗಿ ಮೂಲೆ ಸೇರಿದ 3rd Person..!!

ಟಿಷ್ಯೂ...!!!!

ಕಸದ ಬುಟ್ಟಿ ಸೇರಿರುವುದಕ್ಕೆ ವ್ಯಥೆಯಿಲ್ಲ ನನಗೆ,
ನೀವು ಅಳುತ್ತಿರುವಾಗ ನನ್ನ ನೆನಪಾಯ್ತಲ್ಲಾ....
ನಿಮ್ಮ ಕಣ್ನೀರು, ಸಿಂಬಳವನ್ನು ಒರೆಸಿದೆನಲ್ಲಾ
ಎನ್ನುವ   ತೃಪ್ತಿ ನನಗಿದೆ..........
                
                            -ಇಂತಿ
                                      ಟಿಷ್ಯೂ...!!!
                             

Search This Blog