Tuesday, 7 March 2017

ಯಾವ ಜನ್ಮದ ಮೈತ್ರಿ ಈ ಜನ್ಮದಲಿ ಬಂದು ನಮ್ಮಿಬ್ಬರನು ಮತ್ತೆ ಬಂಧಿಸಿಹುದೋ ಕಾಣೆ !

ಯಾಕೋ ಏನೋ ಅವತ್ತು ಬೆಳಿಗ್ಗೆ ಎದ್ದಾಗಿನಿಂದ ಕುವೆಂಪು ತಾತ ರಚಿಸಿದ
 ಯಾವ ಜನ್ಮದ ಮೈತ್ರಿ ಈ ಜನ್ಮದಲಿ ಬಂದು
ನಮ್ಮಿಬ್ಬರನು ಮತ್ತೆ ಬಂಧಿಸಿಹುದೋ ಕಾಣೆ !  ಹಾಡೇ ಗುಯ್ ಗುಟ್ಟುತ್ತಿತ್ತು ..!!
ಈ ಹಾಡಿಗೂ ನನಗೂ ಏನು ಸಂಭಂದವಿದೆ ಅಂತ ಪ್ರಶ್ನಿಸಿಕೊಂಡ೦ತೆಲ್ಲಾ ಪ್ರಶ್ನೆಗಳ ಸರಮಾಲೆಯೇ ಹಾರುತ್ತಿತ್ತು .
ಉತ್ತರ ಸಿಗದ ಪ್ರಶ್ನೆಗಳ ಜೊತೆ ಗುದ್ದಾಡುವುದಕ್ಕಿಂತಾ ಅದರ ಬಗ್ಗೆ ಯೋಚನೆ ಮಾಡದಿರುವುದೇ ಸೂಕ್ತವೆನಿಸಿ ಸ್ನಾನಕ್ಕೆ ನೀರನ್ನು ಬಿಸಿಮಾಡಲು ಹೋಗುತ್ತಿರುವಾಗ ಮೊಬೈಲ್ ಸದ್ದು ಮಾಡಿತ್ತು . ಮೊನ್ನೆ ತಾನೇ ಅಕ್ಕನ ಫ್ರೆಂಡ್ ಅಂತ ಪರಿಚಯ ಆದವನು ಇಸ್ಟೊಂದು ಬೇಗ ಇಷ್ಟು ಹತ್ತಿರಕ್ಕೆ  ಅಂತಾನೆ ತಿಳಿಯಲಿಲ್ಲ , ಜಾಸ್ತಿ ಯೋಚನೆ ಮಾಡಲು ಸಮಯವಿಲ್ಲದ ಕಾರಣ ಕೈ ಮೊಬೈಲ್ ನ ಹಸಿರು ಗುಂಡಿಯನ್ನು ಒತ್ತಿಯಾಗಿತ್ತು .
"ಹಲೋ "
"ಹಾಯ್ .... !! ಗುಡ್ ಮಾರ್ನಿಂಗ್ "
"ಯಾರಂತ ಗೊತ್ತಾಯ್ತಾ ? ನನದೆ ಯೋಚ್ನೇಲೆ ಇದ್ದಂಗಿತ್ತು " ಅಂದ
 ಸ್ವಲ್ಪ ಜಾಸ್ತಿ ವಯ್ಯಕ್ತಿಕ ಅನಿಸಿದರು ಹಾಗೆಂದು ಕೇಳುವ ಮನಸ್ಸಾಗಲಿಲ್ಲ ..
"ಇಲ್ಲಾ ಹಂಗೇನಿಲ್ಲ .." ಅಂತ ಬಾಯಿಮಾತಿಗೆ  ಹೇಳಿದೆನೆ೦ಬುದು ಆತನ ಗಮನಕ್ಕೆ ಬಂದಂತಿರಲಿಲ್ಲ.
ಅದು ಇದು ಅಂತ ಮಾತಾಡಿ  ಇಟ್ಟಾಗ ೧೫ ನಿಮಿಷವಾಗಿತ್ತು ..
ಕೆಲಸಗಳನ್ನೆಲ್ಲಾ ಮುಗಿಸಿ ಆಫೀಸ್ ಗೆ ಹೊರಟಾಗ ಗಂಟೆ ಹತ್ತಾಗಿತ್ತು..

ಮಳೆ ಬರುವ ಹಾಗಿತ್ತು ವಾತಾವರಣ .. ಆದರಾಗಲೇ ಮನಸ್ಸಿನ ಮೇಲೆ ಮಳೆ ಸುರಿದು ಒದ್ದೆಯಾಗಿತ್ತು, ಛತ್ರಿ ಹಿದಿಯಲಸಾಧ್ಯವಾದ್ದರಿಂದ .ಅಪರಿಚಿತರೊಂದಿಗೆ ಮಾತನಾಡಲು ಹೆದರುವ ನಾನು ಮುಂದಿನ ಮುಕ್ಕಾಲು ಭಾಗ ಜೀವನವನ್ನು ಅವನ ಜೊತೆಯಲ್ಲಿ ಹೆಜ್ಜೆ ಹಾಕಲು ತಯಾರಾಗಿದ್ದೆ .

Friday, 26 September 2014

ದೇವರೇ ನಿನಗೊಂದು ಥ್ಯಾಂಕ್ಸ್ ....

                    ಪ್ರತಿದಿನ 8:00 ಗಂಟೆಗಾಗುತ್ತಿದ್ದ ಸೂರ್ಯೋದಯ ಇವತ್ತು 7:00 ಗಂಟೆಗೆಲ್ಲಾ ಆಗಿತ್ತು... ಎಂದಿನಂತೆ ಕಣ್ಣುಜ್ಜುತ್ತಾ ಮೊಬೈಲ್  ನೋಡಿದ ನನಗೆ ಒಂದು ಆಶ್ಚರ್ಯ ಕಾದಿತ್ತು,  ನಿನ್ನಿಂದ ಮೆಸೇಜ್ ಒಂದು ಇನ್ಬಾಕ್ಸ್ ಅಲ್ಲಿ ಕುಳಿತಿತ್ತು .. ಇದು ನಿಜವಾ ಅಥವಾ ಕನಸಾ ಅಂತ ನಂಬಲಾಗಲಿಲ್ಲ . ಯಾವುದಕ್ಕೂ ಇರಲಿ ಮುಖ ತೊಳೆದುಕೊಂಡು ದೇವರಿಗೊಂದು ಸಲಾಮ್ ಹಾಕಿ ನೋಡುವಾ ಅಂತ ಬಚ್ಚಲಿನೆಡೆಗೆ ಹೆಜ್ಜೆ ಹಾಕಿದೆ..

ಬೆಳಿಗ್ಗೆ ತುಂಬಾನೇ ಬೇಗ ಸೂರ್ಯೋದಯವಾದ ಕಾರಣದಿಂದ ಯಾವುದೇ ಗಡಿಬಿಡಿಯಿರಲಿಲ್ಲ. ಆರಾಮವಾಗಿ ನಿತ್ಯಕರ್ಮವನ್ನು ಮುಗಿಸಿ ಮೊಬೈಲ್ಮೇಲೆ   ಇನ್ನೊಮ್ಮೆ ಕಣ್ಣಾಡಿಸಿದೆ. New Unread Message ಅಂತ ಮೊಬೈಲ್ ನ Green LED, Blink ಆಗುತ್ತಿತ್ತು ,  ಕುತೂಹಲದಿಂದ Message ಓಪನ್ ಮಾಡಿದೆ. 

"Hi hru sir....nanu yaaru nenapidina?? " 

           - "Maryokagattaa...??  saayotankanu nenpiratte.. Im fine, thanks .. you??? "

 ಇದೆಲ್ಲಾ ನಿಜನಾ ಸುಳ್ಳಾ ಅಂತಾ ಯೋಚನೆ ಮಾಡ್ತಾ ಸ್ನಾನ, ಸಂಧ್ಯಾವಂದನೆ ಮತ್ತು ಪೂಜೆ ಮುಗಿಸಿ ರೆಡಿಯಾಗಿ ಎಂದಿನಂತೆ ಮನೆ ಪಕ್ಕದ ಕ್ಯಾಂಟೀನ್ ಅಲ್ಲಿ ತಿಂಡಿ ತಿಂದು ಆಫೀಸ್ ಗೆ ಬಂದೆ.. ಅಸ್ಟರಲ್ಲಾಗಲೆ ಇನ್ಬಾಕ್ಸ್ ಅಲ್ಲಿ ನನ್ನ replyಗಾಗಿ ಇನ್ನೊಂದು ಮೆಸೇಜ್ ಕಾದಿತ್ತು . 

"m also fine,wr r u ? "

            - "Tumkur, now in office, what about u? "

"ok, native itself, ivaaga kelsad mele Kerala Bandidini, nale return"

           - "Ohh... Hege Sudden agi nanna nenpaytu?? "

"wanna talk to you, i have lost all contacts, can i have your no? "

            - Yup.. +9194XXXXXXXX

ಆಫೀಸ್ ಅಲ್ಲಿ  ತುಂಬಾ ಕೆಲಸ ಇರುವ ಕಾರಣದಿಂದ ನಿನಗೆ ನಂಬರ್ ಸೆಂಡ್  ಮಾಡಿ ಕೆಲಸದಲ್ಲಿ ಮುಳುಗಿದೆ ... 

ಅಷ್ಟರಲ್ಲಿ ಮೊಬೈಲ್ ಪರದೆ ಮೇಲೆ true caller, ಇಂದ ನೋಟಿಫಿಕೇಶನ್ incoming call "Sxxxxx Xxxxx"

ಎದುರಿಗೆ ಸಿಕ್ಕರೆ ಕಪಾಳಕ್ಕೆರಡು ಬಿಟ್ಟು ಮಾತನಾಡಬೇಕು ಅಂದುಕೊಂಡಿದ್ದೆ .... ಆದರೆ ಮೊದಲಿನಂತೆ ಮಾತನಾಡುತ್ತಿದ್ದೆ, ಕೋಪವೆಲ್ಲಾ ಹಲೋ ಅನ್ನೋ ಶಬ್ದ ಕೇಳಿದಕೂಡಲೇ ಮಾಯವಾಗಿತ್ತು.. ಒಂದು ವರ್ಷದ ಹಿಂದೆ ಇರುವ ಅದೇ ಆತ್ಮೀಯತೆ ಈಗ ಕೂಡಾ ಹಾಗೆ ಇತ್ತು... ನಿನ್ನ ಧ್ವನಿಯಲ್ಲಿ ಆಗಿರುವ ಪ್ರೀತಿ ಈಗ ಕೂಡ ಎದ್ದು ಕಾಣುತ್ತಿತ್ತು . ಒಂದು ವರ್ಷ ಕಳೆದುಕೊಂಡಿದ್ದ ಸಂತಸ ಒಮ್ಮೆಲೆ ಬಡ್ಡಿ ಸಮೇತ ಸಿಕ್ಕಂತಾಗಿತ್ತು .. ಮಾತಿನ್ನು ಮುಂದುವರಿಯುತ್ತಿತ್ತು ನಿನ್ನ ಮೊಬೈಲ್ ಬ್ಯಾಟರಿ Low ಆಗದಿದ್ದಲ್ಲಿ .. 

ಅದಾಗಲೇ ಸಮಯ 5:30, ಮಾಡಲೇ ಬೇಕು ಅಂತ ಎತ್ತಿಟ್ಟುಕೊಂಡಿದ್ದ ಕೆಲಸದ File ಗಳೆಲ್ಲಾ  ಮತ್ತೆ Desk ನೊಳಗೆ ಮತ್ತೆ ಮುದುಡಿ ಮಲಗಿದವು. ಮನಸ್ಸು ಹಾರಾಡುತ್ತಿತ್ತು ರೆಕ್ಕೆ ಬಲಿತ ಹಕ್ಕಿಯಂತೆ ..  Logout ಆಗಿ ಮನೆಗೆ ಬಂದು Fresh-up ಆದಾಗ ಸಮಯ 7:30, ಮತ್ತೆ ನಿನ್ನ Call... ರಾತ್ರಿಯೆಲ್ಲಾ ಮಾತು ಮಾತು ಮಾತು ..... ಮಲಗಿದ್ಯಾವಾಗ ಅಂತ ನೆನಪಿಲ್ಲ .. 

ಮುಗಿದೇ ಹೋಯಿತೆಂದುಕೊಂಡಿದ್ದ ಅಧ್ಯಾಯ ಮತ್ತೆ ಶುರುವಾಗಿದೆ , ಸತ್ತಿರುವ ಮರದ ಬುಡದಲ್ಲೊಂದು ಮೊಳಕೆಯೊಡೆದಿದೆ... ಮತ್ತೆ ನಿನ್ನೊಂದಿಗೆ ಮಾತನಾಡುತ್ತೇನೆ ಅಂತ ಅಂದುಕೊಂಡಿರಲಿಲ್ಲ ...  
ಮತ್ತೆ ನಿನ್ನನ್ನು ಕೊಟ್ಟ ದೇವರಿಗೊಂದು ಥ್ಯಾಂಕ್ಸ್ ....  :)  

ಈ ಸ್ನೇಹ ಯಾವಾಗಲೂ ಹೀಗೆ ಇರಲಿ ಎಂದು ಆಶಿಸುತ್ತಾ ..... 

Sunday, 6 April 2014

ಮರೆತರೂ ಮರೆಯಲಾಗದ ಜನುಮದಿನ ..

                           ವರ್ಷವಾಗುತ್ತಾ ಬಂತು ನಿನ್ನನ್ನು ಕಳೆದುಕೊಂಡು,...  ಮರೆತೆನೆಂದರೂ ಮರೆಯಲಾಗುತ್ತಿಲ್ಲಾ , ನನಗದೇನು ಮೋಡಿ ಮಾಡಿದ್ದೆ ನೀನು, ನಿನ್ನನ್ನು ಮರೆಯಲಾಗದಂತೆ ? ನೀನು ನನ್ನನು ಮರೆತಿರಬಹುದು (!) ಮರೆತಂತೆ ನಟಿಸುತ್ತಿರಲೂಬಹುದು  ...
ಆಲಸ್ಯ ತೋರುತ್ತಿದ್ದ ಕೈ ಪೆನ್ನನ್ನು ಹುಡುಕುತ್ತಿದೆ ನಿನ್ನ ಹುಟ್ಟಿದ ಹಬ್ಬ ಅಂತ ಗೊತ್ತಿದ್ದೂ ನಿನಗೆ ಕರೆಮಾಡಿ ಶುಭ ಹಾರೈಸುವ ಸ್ಥಾನದಲ್ಲಿಲ್ಲವಲ್ಲ .. ಅದಕ್ಕೆ ಇರಬಹುದು ಈ ಮೂಲಕವಾದರೂ ನಿನಗೆ ಶುಭ ಕೋರುವ ಆಶಯವಿರಬಹುದು .. 

ನಮ್ಮಿಬ್ಬರ ಮಧ್ಯ ಯಾವತ್ತಾದರೂ ನಮ್ಮ ಬಗ್ಗೆ ಜಗಳವಾಗಿದೆಯಾ??  ಇಲ್ಲಾ .... ನೆನಪಾಗ್ತಿಲ್ಲ ... ಆದರೆ ನಾವು ಜಗಳವಾಡಿದ್ದು.. ಅತ್ತಿದ್ದು ರಂಪಾಟ ಮಾಡಿದ್ದು ಯಾವುದೋ ಮೂರನೇ ವ್ಯಕ್ತಿಗಾಗಿ  ...ಸಂಭದಗಳ ಬೆಲೆಯೇ ತಿಳಿಯದ ಮೂರ್ಖನಿಗಾಗಿ .. ಈಗ ನಾವಿಬ್ಬರೂ ಮೂರ್ಖರಿರಬಹುದು.. ಆ ಮೂರ್ಖನ ಮೂರ್ಖತನದಿಂದ ನಮ್ಮಿಬ್ಬರ ನಡುವೆ ಒಡೆಯಲಾಗದಂತಹ ದಾಟಿ ಬರಲಾಗದಂತಹ ದೊಡ್ಡ ಗೋಡೆಯ ನಿರ್ಮಾಣವಾಯಿತು .. ಏನೇ ಇರಲಿ ನಡೆದದ್ದು ನಡೆದು ಹೋಯಿತು ಅದರ ಬಗ್ಗೆ ಚರ್ಚೆ ಅನವಶ್ಯಕ ...  

  "ತುಮ್ ಹಿ ಹೊ " ಹಾಡನ್ನು ಕೇಳಿದಾಗಲೆಲ್ಲಾ ನೀನೆ ನನ್ನ ಕಣ್ಣ ಮುಂದೆ ಬಂದಂತಾಗುತ್ತಿದೆ , ನನ್ನ ಕಿವಿಯಲ್ಲಿ ನೀನು ಹಾಡಿದಂತೆ ಗುಂಯ್ಗುಟ್ಟುತ್ತಿದೆ  , ನಿನ್ನ ಮರೆಯಲು ಪ್ರಯತ್ನ ಮಾಡಿದಸ್ಟೂ ನನ್ನ ನನಗೆ ಈ ಹಾಡು ಮತ್ತೆ ಮತ್ತೆ ಕೇಳುತ್ತದೆ .. ನನ್ನ ನಿನ್ನ ಮತ್ತೆ ಈ ಹಾಡಿನ ಮಧ್ಯೆ ಇರುವ ಅನುಭಂದ ಏನಂತಾ ತಿಳಿತಿಲ್ಲ.  

ಇಸ್ಟೊಂದು ಹಠ ಯಾಕೆ ನನಗೆ ಅಂತ ತಿಳಿಯುತ್ತಿಲ್ಲ . !! ನಿನ್ನಿಂದಲೇ ಕಲಿತದ್ದಿರಬೆಕು..... ನೀನು ನನ್ನ ಜೀವನದಲ್ಲಿ ಮತ್ತೆ ಪಾದಾರ್ಪಣೆ ಮಾಡುತ್ತಿಯಾ ಅನ್ನ್ನೋ ನಂಬಿಕೆ ನನಗೇನು ಇಲ್ಲ .. ಬಂದರೆ ಸಂತೋಷ .. ನಿನಗಾಗಿ ಯಾವಾಗಲೂ ಕಾಯುತ್ತಿರುವೆ ... 

ನಿನ್ನ ಜೀವನ ಸದಾ ಸಂತಸದಿಂದ ತುಂಬಿರಲೆಂದು , ಈ ಹುಟ್ಟಿದ ದಿನದಂದು ಆಯುಷ್ಯ ಆನಂದ ಆರೋಗ್ಯ ಐಶ್ವರ್ಯ ಅಭಿವೃದ್ದಿಯಾಗಲೆಂದು ಹಾರೈಸುತ್ತೇನೆ  ... 

ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು .... 


Tuesday, 1 October 2013

"ಖುಚ್ ಪಾನೇಕೇಲಿಯೆ ಖುಚ್ ಖೋನಾ ಪಡತಾ ಹೈ" ಈ ಮಾತು ನಿಜವಾ ???

                 ಯಾವುದೇ ಒಂದು ವಸ್ತು, ವ್ಯಕ್ತಿಯನ್ನು ಅಥವಾ ಕೆಲಸವನ್ನು ಕಳೆದುಕೊಂಡಮೇಲೆ ಇರಬಹುದು ಅದರ / ಅವರ ಬೆಲೆಯ ಅರಿವಾಗುವುದು ...  ನಾವು ಸಮಯ  ನಮ್ಮ ಕೈಯ್ಯಲ್ಲಿ ಇರುವಾಗ  ಸರಿಯಾಗಿ ಉಪಯೂಗಿಸಿಕೊಳ್ಳದೇ ವಸ್ತು ಅಥವಾ ವ್ಯಕ್ತಿ ನಮ್ಮ ಕೈಜಾರಿದ ಮೇಲೆ ಅವರಿಗಾಗಿ ಹಾತೊರೆದರೆ ಮತ್ತೇ ಸಿಗಬಹುದಾ ??? ಆಕಸ್ಮಾತ್ ಸಿಕ್ಕರೂ ಈಗಿರುವ ಹೊಂದಾಣಿಕೆ ಆವಾಗಲೂ ಇರಬಹುದಾ???? ದೇವರು ನಮಗೆ ತುಂಬಾ ಅವಕಾಶ ಕೊಡುವುದಿಲ್ಲ ಸಿಕ್ಕ ಅವಕಾಶ ಉಪಯೋಗಿಸಿಕೊಳ್ಳದೆ, ಆಮೇಲೆ  ದೇವರನ್ನು ಕೇಳಿದರೆ ಅವನೇನು ಮಾಡಿಯಾನು ಪಾಪ ??  ಅವನಿಗೆ ನಮ್ಮನ್ನು ಮತ್ತು  ಬೇಡಿಕೆಗಳನ್ನು  ನೋಡಿಕೊಳ್ಳುವುದೊಂದೇ  ಕೆಲಸವಲ್ಲವಲ್ಲ...!!   ಎಂಬೆಲ್ಲಾ ದ್ವಂಧ್ವಗಳ ನಡುವೆಯೂ , ಮನಸ್ಸಲ್ಲೊಂದು ನಿರ್ಧಾರ ಧೃಡವಾಗುತ್ತಿದೆ...

"ಖುಚ್ ಪಾನೇಕೇಲಿಯೆ ಖುಚ್ ಖೋನಾ ಪಡತಾ ಹೈ"  ಈ ಮಾತು ನಿಜವಾ ?? ಗೊತ್ತಿಲ್ಲ ..
ಏನನ್ನು ಪಡೆದುಕೊಳ್ಳುತ್ತೇನೆ ಎಂದು ತಿಳಿದುಕೊಳ್ಳುವುದರ ಮೊದಲೇ ಇನ್ನೇನೋ  ಕಳೆದುಕೊಳ್ಳಲು ತಯಾರಾಗಿಯಾಗಿದೆ.......
  

Wednesday, 21 August 2013

ನೀ ಬಂದೆ ನನ್ನ ಜೀವನದಲ್ಲಿ

ಮಣಿದೆ ನಿನ್ನ ಪ್ರೀತಿಗೆ ... ಕರಗಿದೆ ನಿನ್ನ ಪ್ರೀತಿಯಲ್ಲಿ,
ಬದುಕುತಿದ್ದೆ ನನ್ನದೇ ಒಂದು ಜೀವನ ಶೈಲಿಯಲ್ಲಿ,
ಕನಸು ಕಟ್ಟುವುದೇ ಕೆಲಸವಾಗಿತ್ತು ಮನದಲ್ಲಿ,
ನೀನೀಗ ಬಂದೆಯಲ್ಲ  ನನ್ನ ಜೀವನದಲ್ಲಿ,
ಮತ್ತೊಮ್ಮೆ ಆಸೆ ಮೂಡಿತು ಬಾಡಿದ ಮನದಲ್ಲಿ,
ಕನಸುಗಳೆಲ್ಲ ರೆಕ್ಕೆ ಬಿಚ್ಚಿ ಹಾರಾಡುತ್ತಿವೆ ಆಗಸದಲ್ಲಿ.... 

Saturday, 20 July 2013

Anniversary ಗಿಫ್ಟ್...

          ಒಂದು ವರ್ಷ..!!! ಒಂದು ವರ್ಷ ಹೇಗೆ ಕಳೆಯಿತು ಅಂತಾನೆ ಗೊತ್ತಾಗ್ತಿಲ್ಲ ಕಣೋ ...  ಇನ್ನೂ ನೀನು ತಲೆಬಾಗಿಲ ಮೇಲೆ ಅಲಂಕರಿಸಿ ಅಕ್ಕಿ ತುಂಬಿ ಇಟ್ಟ ಸೇರನ್ನು ನಾಚುತ್ತಾ ತುಳಿದು ಗೃಹಪ್ರವೇಶ ಮಾಡಿದ್ದು, ನಿನ್ನ ಅಮ್ಮನನ್ನು ತಬ್ಬಿಕೊಂಡು ಅತ್ತಿದ್ದು, ನಿನ್ನ ಅಣ್ಣ ಬಂದು ನಿಮ್ಮಿಬ್ಬರನ್ನು ಸಮಾಧಾನ ಮಾಡಿದ್ದು, ನಾನು ಏನೂ ಮಾಡಲರಿಯದ ಮಂಕನಂತೆ ನಿನ್ನನ್ನೇ ನೋಡುತ್ತಿದ್ದುದು ಎಲ್ಲಾ ಕಣ್ಣ ಮುಂದೆ ಕಟ್ಟಿದಂತಿದೆ..!! ಆಗಲೆ ಮದುವೆಯಾಗಿ ಒಂದು ವರುಷ...!!  ನಿನ್ನ  ಜೊತೆ  ಇರುವಾಗ ಸಮಯ ಯಾಕೆ ಇಷ್ಟು ಬೇಗ ಕಳೆಯುತ್ತೆ ಅಂತಾನೆ ತಿಳಿತಿಲ್ಲ.. ಆದರೆ ಈಗ ನೀನಿರದ ಪ್ರತಿ ನಿಮಿಷವೂ ಒಂದೊಂದು ಗಂಟೆಯಂತೆ ಅನಿಸುತ್ತಿದೆ.. ನೀನು ನನ್ನ ಬರ್ತಡೆ ದಿನ  ಉಡುಗೊರೆ ನೀಡಿದ ಟೈಟಾನ್ ವಾಚ್ ಮತ್ತೆ iPhone ಸರಿಯಾಗಿ ಸಮಯ ತೊರಿಸುತ್ತಿದೆಯಾ ಇಲ್ಲವಾ ಅಂತಾ ಪದೆ ಪದೆ ಪರೀಕ್ಷಿಸುವುದೆ ನನ್ನ ದಿನಚರಿಯ ಬಹುದೊಡ್ಡ ಕೆಲಸವಾಗಿದೆ...!!

         ಯಾವ ಜನುಮದ, ಯಾವ ಪುಣ್ಯದ ಫಲವೋ ನಿನು ನನಗೆ ದೊರಕಿದ್ದು.... ನಮ್ಮ ಮದುವೆ ಒಂಥರಾ ಅರೆಂಜ್-ಲವ್- ಅರೆಂಜ್ ಅಲ್ವಾ..!! ನೀನು ಹೇಳ್ತಿದ್ಯಲ್ಲಾ, ನಾವಿಬ್ರೂ ಡಿಫರೆಂಟ್ ಕಣೊ ಅಂತಾ. ಅದೆಷ್ಟು ನಿಜ..  ಮದುವೆಯ ಹೊಸದರಲ್ಲೆರಡು ಬಾರಿ ತವರಿಗೆ ಹೋದದ್ದು ಬಿಟ್ಟರೆ ನೀನು ತವರಿಗೆ ಹೋದದ್ದು ಯಾವಾಗಂತ ನೆನಪಾಗ್ತಿಲ್ಲ.. ಅಮ್ಮ ಫೋನ್ ಮಾಡಿದಾಗಲೆಲ್ಲಾ ನನ್ನ ತೊಡೆಯಮೇಲೆ ಮಲಗಿ , ಇವರನ್ನು ಇಲ್ಲೇ  ಒಬ್ಬರನ್ನೇ ಬಿಟ್ಟರೆ ಊಟ, ತಿಂಡಿ, ಮನೆ ಎಲ್ಲಾ ಮರೆತು, ಆಫೀಸ್, ಲ್ಯಾಪಿ , ಪ್ರೋಜೆಕ್ಟ್ಸ್ ಅಂತಾ ಆರೋಗ್ಯ ಕೆಡ್ಸಕೊಂಡು ಮಲ್ಗತಾರೆ ಅಂತಾ ಹುಸಿ ಮುನಿಸಿನಿಂದ ಕಂಪ್ಲೆಂಟ್ ಮಾಡ್ತಿಯಲ್ಲಾ, ಯಾಕೊ ಗೊತ್ತಿಲ್ಲ ಕಣೋ ನೀನು ಈ ಥರ ಅಮ್ಮನಲ್ಲಿ ದೂರವಾಣಿಯಲ್ಲಿ ದೂರೊಪ್ಪಿಸೋದನ್ನ ಕೇಳೋಕೆ ತುಂಬಾ ಹಿತವಾಗಿರತ್ತೆ...

        ನೀನು ನಮ್ಮ Marriage Anniversary ದಿನ ಫೋನ್ ನಲ್ಲಿ ಕೊಟ್ಟ Surprise ಗಿಫ್ಟ್ ಸಿಕ್ಕ ಮೇಲಂತೂ ನಂಗೆ ಸ್ವರ್ಗಕ್ಕೆ ಮೂರೇ ಗೇಣು...!! ಕೋತಿ ಕಣೋ ನೀನು, ನಾನು ಅಪ್ಪ ಆಗ್ತಿರೋದನ್ನ ಫೋನ್ ನಲ್ಲಿ ಹೇಳ್ತೀಯಾ  ??   ಯಾವಾಗ ನಿನ್ನ ನೋಡ್ತೀನೋ, ಯಾವಾಗ ಎತ್ತಿ ಮುದ್ದಾಡ್ತೀನೋ ಅನಿಸ್ತಿದೆ.. ಇನ್ನೂ ನಾಲ್ಕು ದಿನ ಬೇಕು ಈ ಹಾಳು ಪ್ರೋಜೆಕ್ಟ್  ಕಂಪ್ಲೀಟ್ ಆಗೊಕೆ...  ಅಲ್ಲೀ ತನಕ ಈ ಚಳಿಯ ದೇಶದಲ್ಲಿ ಒದ್ದಾಡ್ಬೇಕಲ್ಲಾ ಅಂತಾ ಬೇಜಾರು... ಯಾವಾಗ India ಕ್ಕೆ ಬರ್ತೀನೋ ಅನಿಸ್ತಿದೆ... Congrats ಕಣೋ ನೀನು ಅಮ್ಮ ಆಗ್ತಿದೀಯಾ.. ಇನ್ನೇಳು ತಿಂಗಳಲ್ಲಿ ನನ್ನ ಕಂದಮ್ಮನ ಮಡಿಲಲ್ಲೊಂದು ಪುಟ್ಟ ಕಂದಮ್ಮ..  ನೆನೆಸಿಕೊಂಡ್ರೇ ಮೈ ಜುಂ ಅನ್ತಿದೆ..... !!!  ನೀನೇ ಒಂದು ಮಗು ಈಗ ನಿನಗೊಂದು ಮಗು.. Thank You Very Very Very Much ಕಣೋ For Being My Wife :) Love You.....

        ನಮ್ಮ Marriage Anniversary ಗಿಫ್ಟ್ ತುಂಬಾ ಚೆನ್ನಾಗಿದೆ ಕಣೋ...!!  ಮೋದಲೇ ಹೇಳಿದೀನಿ ಕಣೋ  ನಿನ್ನಮ್ಮನ ಹೊಟ್ಟೆಯಲ್ಲಿ ನೀನಿದ್ಧಾಗ ನಿನ್ನಪ್ಪ ದಾಡಿ ಬಿಟ್ಟ ಥರ ನಾನು ಈಗ ಬಿಡೋಕಾಗಲ್ಲ ಅಂತ.. ನಂಗೆ 4 ದಿನ ಶೇವ್ ಮಾಡಿಲ್ಲ ಅಂದ್ರೆ ಗಡ್ಡ ಕೆರೆಯುತ್ತೆ... ಅದು ನಿಂಗೂ ಗೊತ್ತಲ್ವಾ ?? ಈ ಒಂದು ವಿಷಯದಲ್ಲಿ Sorry ಕಣೋ.... ಹಾಂ ಮರ್ತಿದ್ದೆ..  ನಿಂಗಂತಾ ಏನೋ ಗಿಫ್ಟ್ ತಗೊಂಡಿದಿನಿ... ನಂಗೊತ್ತು ನೀನದನ್ನ ತುಂಬಾ ಇಷ್ಟಪಡ್ತೀಯಾ ಅಂತಾ..ನಿಂಗೆ ಒಂದು ಚಿಕ್ಕ Surprise...!!

Miss U ಚಿನ್ನು..... ಮುಂದಿನ Weekend ನಿನ್ ಜೊತೆನೆ...!!


                                                                          ಇಂತಿ Youz
                                                                                         Chweeeet Hubbby

Wednesday, 17 July 2013

ಹೀಗೊಂದು ಪತ್ರ ...!!!

ಡಿಯರ್,
         ನಿನ್ನ Facebook ID ಯನ್ನು ನನ್ನ Facebook ID ಯಲ್ಲಿ Block ಮಾಡ್ತಾ ಇದಿನಿ, ಕಾರಣ ಇಷ್ಟೇ, ನನ್ನ  Profile ತೆರೆದಾಗಲೆಲ್ಲ ನಿನ್ನ Profile ಎಲ್ಲಕ್ಕಿಂತ ಮೊದಲು ಕಾಣ್ಸೋದು, ಆಮೇಲೆ ನೀನು ಲೈಕ್ ಮಾಡಿದ Applications Wall Postಗಳು..   ನೀನು Online ಇರ್ಲಿ ಇಲ್ದೇ ಇರ್ಲಿ ನಿನ್ನ ಪ್ರೊಫೈಲ್ Available  Chat  ನಲ್ಲಿ Display ಆಗ್ತಿರತ್ತೆ.  Facebook ಗೆ ಏನು ಗೊತ್ತು You are not Available to me ಅಂತಾ....!!

        ನಿನ್ನ ID  ನೋಡಿದಾಗಲೆಲ್ಲಾ  ನನ್ನ ಕಣ್ಣು ತುಂಬಿ ಬರ್ತಾ ಇದೆ , ಮನಸ್ಸಿಲ್ಲದ ಮನಸ್ಸಿಂದ ನಿನ್ನ ಮರೆಯುವ ಕೆಲಸ ನಡೆಯುತ್ತಿದೆ. ಮನಸ್ಸು ಗೆಲ್ಲತ್ತಾ, ಬುದ್ದಿ ಗೆಲ್ಲತ್ತಾ ಅಂತಾ ಕಾದು  ನೋಡಬೇಕಿದೆ. ಮರೆತೆನೆಂದರೂ, ಮರೆಯಲಾರದಂತ ನೆನಪು ಕೊಟ್ಟಿರುವೆ ನೀ...  ಮನಸ್ಸೇಕೋ ಮಾತುಕೆಳುತ್ತಿಲ್ಲ ...!

     ನಾನು ಮತ್ತು ನನ್ನ ಮನಸ್ಸು ಎಷ್ಟು ಸೂಕ್ಷ್ಮ ಅಂತಾ ನಿನಗೇ ಗೊತ್ತಲ್ವಾ ?? ಚಿಕ್ಕ ಪುಟ್ಟ ವಿಷಯಕ್ಕೂ ದೊಡ್ಡ ರಂಪಾಟ ಮಾಡುವ ನಾನು ಉಸಿರಿನಿಂದಿರುವುದು ಆಶ್ಚರ್ಯವೇ ....! ನೀನು ತಿರುಗಿ ಬಂದರೂ ಬರಬಹುದೆಂಬ ಒಂದು ಆಸೆ ಮನದಲ್ಲಿದೆಯಲ್ಲಾ.. ಅದೇ ನನ್ನ ಉಸಿರನ್ನು ನನ್ನ ದೇಹದಲ್ಲಿ  ತಡೆಹಿಡಿದಿರುವುದು ಅನ್ಸತ್ತೆ ... !!

      ನಿನ್ನನ್ನು Block ಮಾಡಿದ್ದು ನನ್ನ Facebook ನಲ್ಲಿರಬಹುದು  ಆದರೆ ನನ್ನ ಮನಸ್ಸಿನಿಂದಲ್ಲ  .... ನನ್ನ ದೇಹದಲ್ಲಿ ಉಸಿರು ನಿಂತು ರಕ್ತ ಹೆಪ್ಪುಗಟ್ಟುವ ತನಕ , ನಿನ್ನ ನೆನಪು ಹೆಪ್ಪುಗಟ್ಟುವುದಿಲ್ಲ.. ನಾನು ನಿನ್ನ ಜೀವನದಲ್ಲಿ ಯಾಕಾಗಿ ಬಂದೆನೋ  ಆ ಕೆಲಸ ಸಂಪೂರ್ಣವಾಗಿರುವುದಕ್ಕೆ  ಖುಷಿಯಿದೆ ......

  ಉಸಿರು ನಿಲ್ಲುವ ತನಕವೂ ನಿನಗಾಗಿ ಕಾಯುತ್ತಿರುವೆ... ಬರಬಹುದೆಂಬ ಆಸೆಹೊತ್ತು......  

       

Search This Blog