Tuesday, 7 March 2017

ಯಾವ ಜನ್ಮದ ಮೈತ್ರಿ ಈ ಜನ್ಮದಲಿ ಬಂದು ನಮ್ಮಿಬ್ಬರನು ಮತ್ತೆ ಬಂಧಿಸಿಹುದೋ ಕಾಣೆ !

ಯಾಕೋ ಏನೋ ಅವತ್ತು ಬೆಳಿಗ್ಗೆ ಎದ್ದಾಗಿನಿಂದ ಕುವೆಂಪು ತಾತ ರಚಿಸಿದ
 ಯಾವ ಜನ್ಮದ ಮೈತ್ರಿ ಈ ಜನ್ಮದಲಿ ಬಂದು
ನಮ್ಮಿಬ್ಬರನು ಮತ್ತೆ ಬಂಧಿಸಿಹುದೋ ಕಾಣೆ !  ಹಾಡೇ ಗುಯ್ ಗುಟ್ಟುತ್ತಿತ್ತು ..!!
ಈ ಹಾಡಿಗೂ ನನಗೂ ಏನು ಸಂಭಂದವಿದೆ ಅಂತ ಪ್ರಶ್ನಿಸಿಕೊಂಡ೦ತೆಲ್ಲಾ ಪ್ರಶ್ನೆಗಳ ಸರಮಾಲೆಯೇ ಹಾರುತ್ತಿತ್ತು .
ಉತ್ತರ ಸಿಗದ ಪ್ರಶ್ನೆಗಳ ಜೊತೆ ಗುದ್ದಾಡುವುದಕ್ಕಿಂತಾ ಅದರ ಬಗ್ಗೆ ಯೋಚನೆ ಮಾಡದಿರುವುದೇ ಸೂಕ್ತವೆನಿಸಿ ಸ್ನಾನಕ್ಕೆ ನೀರನ್ನು ಬಿಸಿಮಾಡಲು ಹೋಗುತ್ತಿರುವಾಗ ಮೊಬೈಲ್ ಸದ್ದು ಮಾಡಿತ್ತು . ಮೊನ್ನೆ ತಾನೇ ಅಕ್ಕನ ಫ್ರೆಂಡ್ ಅಂತ ಪರಿಚಯ ಆದವನು ಇಸ್ಟೊಂದು ಬೇಗ ಇಷ್ಟು ಹತ್ತಿರಕ್ಕೆ  ಅಂತಾನೆ ತಿಳಿಯಲಿಲ್ಲ , ಜಾಸ್ತಿ ಯೋಚನೆ ಮಾಡಲು ಸಮಯವಿಲ್ಲದ ಕಾರಣ ಕೈ ಮೊಬೈಲ್ ನ ಹಸಿರು ಗುಂಡಿಯನ್ನು ಒತ್ತಿಯಾಗಿತ್ತು .
"ಹಲೋ "
"ಹಾಯ್ .... !! ಗುಡ್ ಮಾರ್ನಿಂಗ್ "
"ಯಾರಂತ ಗೊತ್ತಾಯ್ತಾ ? ನನದೆ ಯೋಚ್ನೇಲೆ ಇದ್ದಂಗಿತ್ತು " ಅಂದ
 ಸ್ವಲ್ಪ ಜಾಸ್ತಿ ವಯ್ಯಕ್ತಿಕ ಅನಿಸಿದರು ಹಾಗೆಂದು ಕೇಳುವ ಮನಸ್ಸಾಗಲಿಲ್ಲ ..
"ಇಲ್ಲಾ ಹಂಗೇನಿಲ್ಲ .." ಅಂತ ಬಾಯಿಮಾತಿಗೆ  ಹೇಳಿದೆನೆ೦ಬುದು ಆತನ ಗಮನಕ್ಕೆ ಬಂದಂತಿರಲಿಲ್ಲ.
ಅದು ಇದು ಅಂತ ಮಾತಾಡಿ  ಇಟ್ಟಾಗ ೧೫ ನಿಮಿಷವಾಗಿತ್ತು ..
ಕೆಲಸಗಳನ್ನೆಲ್ಲಾ ಮುಗಿಸಿ ಆಫೀಸ್ ಗೆ ಹೊರಟಾಗ ಗಂಟೆ ಹತ್ತಾಗಿತ್ತು..

ಮಳೆ ಬರುವ ಹಾಗಿತ್ತು ವಾತಾವರಣ .. ಆದರಾಗಲೇ ಮನಸ್ಸಿನ ಮೇಲೆ ಮಳೆ ಸುರಿದು ಒದ್ದೆಯಾಗಿತ್ತು, ಛತ್ರಿ ಹಿದಿಯಲಸಾಧ್ಯವಾದ್ದರಿಂದ .ಅಪರಿಚಿತರೊಂದಿಗೆ ಮಾತನಾಡಲು ಹೆದರುವ ನಾನು ಮುಂದಿನ ಮುಕ್ಕಾಲು ಭಾಗ ಜೀವನವನ್ನು ಅವನ ಜೊತೆಯಲ್ಲಿ ಹೆಜ್ಜೆ ಹಾಕಲು ತಯಾರಾಗಿದ್ದೆ .

Search This Blog