ಪ್ರತಿದಿನ 8:00 ಗಂಟೆಗಾಗುತ್ತಿದ್ದ ಸೂರ್ಯೋದಯ ಇವತ್ತು 7:00 ಗಂಟೆಗೆಲ್ಲಾ ಆಗಿತ್ತು... ಎಂದಿನಂತೆ ಕಣ್ಣುಜ್ಜುತ್ತಾ ಮೊಬೈಲ್ ನೋಡಿದ ನನಗೆ ಒಂದು ಆಶ್ಚರ್ಯ ಕಾದಿತ್ತು, ನಿನ್ನಿಂದ ಮೆಸೇಜ್ ಒಂದು ಇನ್ಬಾಕ್ಸ್ ಅಲ್ಲಿ ಕುಳಿತಿತ್ತು .. ಇದು ನಿಜವಾ ಅಥವಾ ಕನಸಾ ಅಂತ ನಂಬಲಾಗಲಿಲ್ಲ . ಯಾವುದಕ್ಕೂ ಇರಲಿ ಮುಖ ತೊಳೆದುಕೊಂಡು ದೇವರಿಗೊಂದು ಸಲಾಮ್ ಹಾಕಿ ನೋಡುವಾ ಅಂತ ಬಚ್ಚಲಿನೆಡೆಗೆ ಹೆಜ್ಜೆ ಹಾಕಿದೆ..
ಬೆಳಿಗ್ಗೆ ತುಂಬಾನೇ ಬೇಗ ಸೂರ್ಯೋದಯವಾದ ಕಾರಣದಿಂದ ಯಾವುದೇ ಗಡಿಬಿಡಿಯಿರಲಿಲ್ಲ. ಆರಾಮವಾಗಿ ನಿತ್ಯಕರ್ಮವನ್ನು ಮುಗಿಸಿ ಮೊಬೈಲ್ಮೇಲೆ ಇನ್ನೊಮ್ಮೆ ಕಣ್ಣಾಡಿಸಿದೆ. New Unread Message ಅಂತ ಮೊಬೈಲ್ ನ Green LED, Blink ಆಗುತ್ತಿತ್ತು , ಕುತೂಹಲದಿಂದ Message ಓಪನ್ ಮಾಡಿದೆ.
"Hi hru sir....nanu yaaru nenapidina?? "
- "Maryokagattaa...?? saayotankanu nenpiratte.. Im fine, thanks .. you??? "
ಇದೆಲ್ಲಾ ನಿಜನಾ ಸುಳ್ಳಾ ಅಂತಾ ಯೋಚನೆ ಮಾಡ್ತಾ ಸ್ನಾನ, ಸಂಧ್ಯಾವಂದನೆ ಮತ್ತು ಪೂಜೆ ಮುಗಿಸಿ ರೆಡಿಯಾಗಿ ಎಂದಿನಂತೆ ಮನೆ ಪಕ್ಕದ ಕ್ಯಾಂಟೀನ್ ಅಲ್ಲಿ ತಿಂಡಿ ತಿಂದು ಆಫೀಸ್ ಗೆ ಬಂದೆ.. ಅಸ್ಟರಲ್ಲಾಗಲೆ ಇನ್ಬಾಕ್ಸ್ ಅಲ್ಲಿ ನನ್ನ replyಗಾಗಿ ಇನ್ನೊಂದು ಮೆಸೇಜ್ ಕಾದಿತ್ತು .
"m also fine,wr r u ? "
- "Tumkur, now in office, what about u? "
"ok, native itself, ivaaga kelsad mele Kerala Bandidini, nale return"
- "Ohh... Hege Sudden agi nanna nenpaytu?? "
"wanna talk to you, i have lost all contacts, can i have your no? "
- Yup.. +9194XXXXXXXX
ಆಫೀಸ್ ಅಲ್ಲಿ ತುಂಬಾ ಕೆಲಸ ಇರುವ ಕಾರಣದಿಂದ ನಿನಗೆ ನಂಬರ್ ಸೆಂಡ್ ಮಾಡಿ ಕೆಲಸದಲ್ಲಿ ಮುಳುಗಿದೆ ...
ಅಷ್ಟರಲ್ಲಿ ಮೊಬೈಲ್ ಪರದೆ ಮೇಲೆ true caller, ಇಂದ ನೋಟಿಫಿಕೇಶನ್ incoming call "Sxxxxx Xxxxx"
ಎದುರಿಗೆ ಸಿಕ್ಕರೆ ಕಪಾಳಕ್ಕೆರಡು ಬಿಟ್ಟು ಮಾತನಾಡಬೇಕು ಅಂದುಕೊಂಡಿದ್ದೆ .... ಆದರೆ ಮೊದಲಿನಂತೆ ಮಾತನಾಡುತ್ತಿದ್ದೆ, ಕೋಪವೆಲ್ಲಾ ಹಲೋ ಅನ್ನೋ ಶಬ್ದ ಕೇಳಿದಕೂಡಲೇ ಮಾಯವಾಗಿತ್ತು.. ಒಂದು ವರ್ಷದ ಹಿಂದೆ ಇರುವ ಅದೇ ಆತ್ಮೀಯತೆ ಈಗ ಕೂಡಾ ಹಾಗೆ ಇತ್ತು... ನಿನ್ನ ಧ್ವನಿಯಲ್ಲಿ ಆಗಿರುವ ಪ್ರೀತಿ ಈಗ ಕೂಡ ಎದ್ದು ಕಾಣುತ್ತಿತ್ತು . ಒಂದು ವರ್ಷ ಕಳೆದುಕೊಂಡಿದ್ದ ಸಂತಸ ಒಮ್ಮೆಲೆ ಬಡ್ಡಿ ಸಮೇತ ಸಿಕ್ಕಂತಾಗಿತ್ತು .. ಮಾತಿನ್ನು ಮುಂದುವರಿಯುತ್ತಿತ್ತು ನಿನ್ನ ಮೊಬೈಲ್ ಬ್ಯಾಟರಿ Low ಆಗದಿದ್ದಲ್ಲಿ ..
ಅದಾಗಲೇ ಸಮಯ 5:30, ಮಾಡಲೇ ಬೇಕು ಅಂತ ಎತ್ತಿಟ್ಟುಕೊಂಡಿದ್ದ ಕೆಲಸದ File ಗಳೆಲ್ಲಾ ಮತ್ತೆ Desk ನೊಳಗೆ ಮತ್ತೆ ಮುದುಡಿ ಮಲಗಿದವು. ಮನಸ್ಸು ಹಾರಾಡುತ್ತಿತ್ತು ರೆಕ್ಕೆ ಬಲಿತ ಹಕ್ಕಿಯಂತೆ .. Logout ಆಗಿ ಮನೆಗೆ ಬಂದು Fresh-up ಆದಾಗ ಸಮಯ 7:30, ಮತ್ತೆ ನಿನ್ನ Call... ರಾತ್ರಿಯೆಲ್ಲಾ ಮಾತು ಮಾತು ಮಾತು ..... ಮಲಗಿದ್ಯಾವಾಗ ಅಂತ ನೆನಪಿಲ್ಲ ..
ಮುಗಿದೇ ಹೋಯಿತೆಂದುಕೊಂಡಿದ್ದ ಅಧ್ಯಾಯ ಮತ್ತೆ ಶುರುವಾಗಿದೆ , ಸತ್ತಿರುವ ಮರದ ಬುಡದಲ್ಲೊಂದು ಮೊಳಕೆಯೊಡೆದಿದೆ... ಮತ್ತೆ ನಿನ್ನೊಂದಿಗೆ ಮಾತನಾಡುತ್ತೇನೆ ಅಂತ ಅಂದುಕೊಂಡಿರಲಿಲ್ಲ ...
ಮತ್ತೆ ನಿನ್ನನ್ನು ಕೊಟ್ಟ ದೇವರಿಗೊಂದು ಥ್ಯಾಂಕ್ಸ್ .... :)
ಈ ಸ್ನೇಹ ಯಾವಾಗಲೂ ಹೀಗೆ ಇರಲಿ ಎಂದು ಆಶಿಸುತ್ತಾ .....