ವರ್ಷವಾಗುತ್ತಾ ಬಂತು ನಿನ್ನನ್ನು ಕಳೆದುಕೊಂಡು,... ಮರೆತೆನೆಂದರೂ ಮರೆಯಲಾಗುತ್ತಿಲ್ಲಾ , ನನಗದೇನು ಮೋಡಿ ಮಾಡಿದ್ದೆ ನೀನು, ನಿನ್ನನ್ನು ಮರೆಯಲಾಗದಂತೆ ? ನೀನು ನನ್ನನು ಮರೆತಿರಬಹುದು (!) ಮರೆತಂತೆ ನಟಿಸುತ್ತಿರಲೂಬಹುದು ...
ಆಲಸ್ಯ ತೋರುತ್ತಿದ್ದ ಕೈ ಪೆನ್ನನ್ನು ಹುಡುಕುತ್ತಿದೆ ನಿನ್ನ ಹುಟ್ಟಿದ ಹಬ್ಬ ಅಂತ ಗೊತ್ತಿದ್ದೂ ನಿನಗೆ ಕರೆಮಾಡಿ ಶುಭ ಹಾರೈಸುವ ಸ್ಥಾನದಲ್ಲಿಲ್ಲವಲ್ಲ .. ಅದಕ್ಕೆ ಇರಬಹುದು ಈ ಮೂಲಕವಾದರೂ ನಿನಗೆ ಶುಭ ಕೋರುವ ಆಶಯವಿರಬಹುದು ..
ನಮ್ಮಿಬ್ಬರ ಮಧ್ಯ ಯಾವತ್ತಾದರೂ ನಮ್ಮ ಬಗ್ಗೆ ಜಗಳವಾಗಿದೆಯಾ?? ಇಲ್ಲಾ .... ನೆನಪಾಗ್ತಿಲ್ಲ ... ಆದರೆ ನಾವು ಜಗಳವಾಡಿದ್ದು.. ಅತ್ತಿದ್ದು ರಂಪಾಟ ಮಾಡಿದ್ದು ಯಾವುದೋ ಮೂರನೇ ವ್ಯಕ್ತಿಗಾಗಿ ...ಸಂಭದಗಳ ಬೆಲೆಯೇ ತಿಳಿಯದ ಮೂರ್ಖನಿಗಾಗಿ .. ಈಗ ನಾವಿಬ್ಬರೂ ಮೂರ್ಖರಿರಬಹುದು.. ಆ ಮೂರ್ಖನ ಮೂರ್ಖತನದಿಂದ ನಮ್ಮಿಬ್ಬರ ನಡುವೆ ಒಡೆಯಲಾಗದಂತಹ ದಾಟಿ ಬರಲಾಗದಂತಹ ದೊಡ್ಡ ಗೋಡೆಯ ನಿರ್ಮಾಣವಾಯಿತು .. ಏನೇ ಇರಲಿ ನಡೆದದ್ದು ನಡೆದು ಹೋಯಿತು ಅದರ ಬಗ್ಗೆ ಚರ್ಚೆ ಅನವಶ್ಯಕ ...
"ತುಮ್ ಹಿ ಹೊ " ಹಾಡನ್ನು ಕೇಳಿದಾಗಲೆಲ್ಲಾ ನೀನೆ ನನ್ನ ಕಣ್ಣ ಮುಂದೆ ಬಂದಂತಾಗುತ್ತಿದೆ , ನನ್ನ ಕಿವಿಯಲ್ಲಿ ನೀನು ಹಾಡಿದಂತೆ ಗುಂಯ್ಗುಟ್ಟುತ್ತಿದೆ , ನಿನ್ನ ಮರೆಯಲು ಪ್ರಯತ್ನ ಮಾಡಿದಸ್ಟೂ ನನ್ನ ನನಗೆ ಈ ಹಾಡು ಮತ್ತೆ ಮತ್ತೆ ಕೇಳುತ್ತದೆ .. ನನ್ನ ನಿನ್ನ ಮತ್ತೆ ಈ ಹಾಡಿನ ಮಧ್ಯೆ ಇರುವ ಅನುಭಂದ ಏನಂತಾ ತಿಳಿತಿಲ್ಲ.
ಇಸ್ಟೊಂದು ಹಠ ಯಾಕೆ ನನಗೆ ಅಂತ ತಿಳಿಯುತ್ತಿಲ್ಲ . !! ನಿನ್ನಿಂದಲೇ ಕಲಿತದ್ದಿರಬೆಕು..... ನೀನು ನನ್ನ ಜೀವನದಲ್ಲಿ ಮತ್ತೆ ಪಾದಾರ್ಪಣೆ ಮಾಡುತ್ತಿಯಾ ಅನ್ನ್ನೋ ನಂಬಿಕೆ ನನಗೇನು ಇಲ್ಲ .. ಬಂದರೆ ಸಂತೋಷ .. ನಿನಗಾಗಿ ಯಾವಾಗಲೂ ಕಾಯುತ್ತಿರುವೆ ...
ನಿನ್ನ ಜೀವನ ಸದಾ ಸಂತಸದಿಂದ ತುಂಬಿರಲೆಂದು , ಈ ಹುಟ್ಟಿದ ದಿನದಂದು ಆಯುಷ್ಯ ಆನಂದ ಆರೋಗ್ಯ ಐಶ್ವರ್ಯ ಅಭಿವೃದ್ದಿಯಾಗಲೆಂದು ಹಾರೈಸುತ್ತೇನೆ ...
ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ....